=== ತಾತ್ವಿಕ ಕಾವ್ಯದ ಪರಿಚಯ === ತಾತ್ವಿಕ ಕಾವ್ಯಗಳು ಭಾರತಕ್ಕೆ , ಕನ್ನಡ ನಾಡಿಗೆ ಹೊಸತಲ್ಲ. ಪ್ರಾಚೀನ ಕಾವ್ಯಗಳಲ್ಲಿ , ವಚನಗಳಲ್ಲಿ , ದಾಸರ ಪದಗಳಲ್ಲಿ, ಸರ್ವಜ್ಞ ನ ತ್ರಿಪದಿಗಳಲ್ಲಿ, ಇತ್ತೀಚೆಗೆ ಬರುತ್ತಿರುವ ಕೆಲವು ಕವನಗಳು, ಚೌಪದಿ ಗಳು - ಕಗ್ಗಗಳು ಮೊದಲಾದವುಗಳಲ್ಲಿ ಅವುಗಳನ್ನು ಕಾಣಬಹುದು. ಉದಾಹರಣೆಗೆ ಕೆಳಗೆ ಒಂದು ಕವನ ಕೊಟ್ಟಿದೆ. === ತಾತ್ವಿಕ ಕವನ-ಕಗ್ಗಗಳು === ಸತ್ಯ - ಮಿಥ್ಯ, ನಿದ್ದೆ ಕೊಡವಿ ಕಣ್ಣ ತೆರೆಯೆ ಬರಿಯ ಬಯಲ ಭೂಮವು ; ಎದ್ದು ನೋಡೆ ನೆತ್ತಿ ಮೇಲೆ ಹತ್ತಿ ಉರಿವ ಸ್ವಾಮಿಯು ; ಸದ್ದೆ ಇಲ್ಲ ಉದ್ದ ಬಯಲು ಪವನ ಮಂದ ಗಾಮಿಯು ; ಇದ್ದರಿಲ್ಲಿ ನಾನೆ ಒಬ್ಬ ನನಗೆ ನಾನೆ ಸ್ವಾಮಿಯು . ||೧|| - ಜಗದೆ ಇದಕು ಮಿಗಿಲು ಏನು ?-ಇರುವುದೆಲ್ಲ ಇಲ್ಲಿಯೆ ; ಸೊಗವು ಏನು? ಕೊರಗು ಏನು? ತಿರುಳು ಎಲ್ಲ ಇಷ್ಟೆಯೆ ; ಬಗೆಯು ಕೆಡಲು ಇದುವೆ ಭವವು -ಎಲ್ಲ ಮನದೊಳಲ್ಲವೆ? ನಗೆಯ ಕಡಲು ಸುಖದ ಹೊನಲು ಬರಿಯ ಮಿಥ್ಯೆಯಲ್ಲವೆ! ||೨|| - ಇರುಳೊಲೆಲ್ಲ ವಿರಹಬಟ್ಟು ಇನನು ಬರಲು ಅರಳುವ ; ದುಂಬಿ ಮುದಿಸೆ ಬಯಸಿ ಬಳಲಿ ನಿಂತ ಕುಸುಮ ಕುಸುಮಿಪ; ಭಾವ ತುಂಬಿ ನೋಟ ಸೇರಿ ಹೃದಯ ಹೃದಯ ಮಿಡಿಯುವ; ಎಲ್ಲ ಬೆಮೆಯು ಸಾವ ನೋಡೆ ಸನಿಹ ಕುಳಿತು ಕರೆಯುವ. ||೩|| - ಕೋಟಿ ಕೋಟಿ ವರುಷದಿಂದ ಎಣಿಪ ದಿನದ ಸಂಖ್ಯೆಯು, ಸಾಟಿಯಿಲ್ಲವೆಂದು ತಿಳಿವ ಧೀಯ ಕೃತಿಯ ಕಂತೆಯು, ಮೇರೆ ಮೀರಿ ಅರಿವ ಮೀರಿ ಹರಿದ ಜಗದ ಸಂಖ್ಯೆಯು, ಸುಳ್ಳು ಕತೆಯು ಕಾದುಕುಳಿತ ಸಾವು ತಾನು ನುಂಗಲು! ||೪|| - ಟಿಪ್ಪಣಿ: ಭೂಮ -ಅತಿ ದೊಡ್ಡದು, ವಿಶಾಲವಾದುದು.; ಸ್ವಾಮಿ=ಸೂರ್ಯ; ೨)ಆತ್ಮ , ಬ್ರಹ್ಮ , ಬಗೆ=ಮನಸ್ಸು ; ಮಿಥ್ಯೆ =ಸುಳ್ಳು ,ಅಸ್ಥಿರ; ಬೆಮೆ=ಭ್ರಮೆ; ಧೀ =ಬುದ್ಧಿ , ಮೇಧಾಶಕ್ತಿ. ಹರಿದ =ಹರಡಿದ ವಿಸ್ತರಿಸಿದ . - === ಕವನ ೨: ನಾನೆಂಬುವನಾರು ? === <ನಾನೆಂಬುವನಾರು ?> ನಾನು ನಾನೆಂದೆನುತ ನನಗೆ ನನಗೆಂದೆನುತ ಎನ್ನೊಳಗಡಗಿದ್ದು ಆಳುವನಾರೋ ಇವನು? ಪರಿಪರಿಯ ತರದಲ್ಳಿ ಪರಿಪರಿಯ ಊಹೆಗಳ ತೆರವಿಲ್ಲದಯೆ ಮಾಡುವ ಗೂಢನಿವನಾರು? ||೧|| - ಹಿಂದು ಮುಂದಿನದೆಲ್ಲ ಕಂಡಂತೆ ಚಿತ್ರಿಸುತ ಸುಂದರದ ಕನಸುಗಳ ಹೆಣೆವನಾರೊ ಇವನು? ಐದು ಇಂದ್ರಿಯಗಳಲಿ ಬೇರೆ ಬೇರೆಯೆ ತೋರಿ ಬಗೆ ಬಗೆಯ ಅನುಭವವ ಪಡೆವನಾರೊ ಇವನು - ವಿವಿಧ ಅಣುಗಳು ಸೇರಿ ವಿವಿಧ ಅನ್ನವ ಸೇರಿ ಸವೆಯುವೀ ದೇಹಕ್ಕೆ ಕೊರಗುವವನಾರೊ ಇವನು? ಸುಪ್ತ ಚೇತನದಲ್ಲಿ ಸುಪ್ತವಲ್ಲದೆ ತೋರಿ ಸುಪ್ತವಾನಿರ್ಗುಣದಿ ಸಗುಣನಿವನಾರೋ? - ನಾನು ನನಗೆಂದೆನುತ ತನ್ನಿಷ್ಟದಲೆ ನಡೆದು ತನ್ನ ಹುಟ್ಟರಿಯದಿಹನಾರೊ ಇವನು? ಎಲ್ಲಿಂದ ಬಂದಿರುವ ಎಲ್ಲಿ ಹೋಗುವನಿವನು ಇಲ್ಲಿ ಇಂತೇಕೆ ಬಂಡಾಟಗೊಳುವನಿವನು? (ರಚನೆ :-ಬಿ.ಎಸ್.ಚಂದ್ರಶೇಖರ,ಸಾಗರ ಕಾಪಿ ರೈಟಿನಿಂದ ಮುಕ್ತ)) === ಶ್ರೀ ಡಿ.ವಿ.ಜಿಯವರ ಕಗ್ಗ === ಶ್ರೀ ಡಿ.ವಿ.ಜಿ ಕನ್ನಡ ಕಾವ್ಯಕ್ಷೇತ್ರದಲ್ಲಿ "ಮಂಕುತಿಮ್ಮನ ಕಗ್ಗ" ಹಾಗೂ "ಮರುಳ ಮುನಿಯನ ಕಗ್ಗ" ದ ಮೂಲಕ ಡಿ ವಿ ಜಿ ಮನೆಯ ಮಾತಾದವರು: ಇದು ಕನ್ನಡ ಭಗವದ್ಗೀತೆ ಎಂದು ಹೆಸರಾಗಿದೆ. ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ | ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು || ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು | ಪದ ಕುಸಿಯೆ ನೆಲವಿಹುದು -- ಮಂಕುತಿಮ್ಮ ||" (ಡಿ.ವಿ.ಜಿ - ತಾಣದಿಂದ) - ಕನ್ನಡ ವಿಕಿಸೊರ್ಸನಲ್ಲಿ | ಮಂಕುತಿಮ್ಮನ ಕಗ್ಗ ೪.ಏನು ಜೀವನಾರ್ಥ ೫. ದೇವರೆಂಬುದದೇನು ೬. ಒಗಟೆಯೇನೀ ಸೃಷ್ಟಿ ೭. ಬದುಕಿಗಾರ್ ನಾಯಕರು ೮. ಕ್ರಮವೊಂದು ಲಕ್ಷ್ಯವೊಂದುಂಟೇನು === ಸರ್ವಜ್ಞ ವಚನ === ಒಂದರ ಮೊದಲೊಳಗೆ ಬಂದಿಹುದು ಜಗವೆಲ್ಲ ಒಂದರ ಮೊದಲನರಿದರೆ ಜಗ ಕಣ್ಣ - ಮುಂದೆ ಬಂದಿಹುದು ಸರ್ವಜ್ಞ || ಟಿ : ಜಗದ ಮೂಲವಾದ ಆ ಒಂದು ಬ್ರಹ್ಮವನ್ನು ಅರಿತರೆ ಜಗತ್ತನ್ನೇ ಅರಿಯಬಹುದು. - ತನ್ನ ತಾ ಅರಿದಂಗೆ ಭಿನ್ನ ಭಾವನೆ ಯಿಲ್ಲ, ತನ್ನವರು ಇಲ್ಲ ,ಪರರಿಲ್ಲ, ತ್ರಿಭುವನ ತನ್ನೊಳಗೆ ಇಹುದು ಸರ್ವಜ್ಞ || ಟಿ : ತಾನು ಆತ್ಮ ಸ್ವರೂಪನು ಎಂದು ಅರಿತವನು, ಎಲ್ಲವನ್ನೂ ತನ್ನೊಳಗೆ ಕಾಣುತ್ತಾನೆ. "ಯಸ್ತು ಸರ್ವಾಣಿ ಭೂತಾನಿ ಆತ್ಮನ್ಯೇವಾನು ಪಶ್ಯತಿ, ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ|| ಈಶಾವಾಸ್ಯೋಪನಿಷತ್ || - ==== ನೋಡಿ : ==== ನೋಡಿ ಕನ್ನಡ ಸಾಹಿತ್ಯ ಪ್ರಕಾರಗಳು | ಕಾವ್ಯ